



ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಈ ಸಿನಿಮಾದಲ್ಲಿ ಸುದೀಪ್ ಜೊತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಫಸ್ಟ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ವಿಕ್ರಾಂತ್ ರೋಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಅನೂಪ್ ಬಂಡಾರಿ ಶುಕ್ರವಾರ ವಿಆರ್ ಜೊತೆ ಜಿಆರ್ ಎಂದರೆ ಏನು ಗೆಸ್ ಮಾಡಿ ಎಂದು ಅಭಿಮಾನಿಗಳ ಮುಂದೆ ಪ್ರಶ್ನೆ ಮುಂದಿಟ್ಟಿದ್ದರು. ಜೊತೆಗೆ ಈ ಆಟ ನಾಳೆಯವರೆಗೂ ಮುಂದುವರಿಯುತ್ತದೆ ಎಂದು ತಿಳಿಸಿದ್ದರು.
ಇದೀಗ ಚಿತ್ರತಂಡ ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಅವತಾರ ರಿವೀಲ್ ಮಾಡಿದ್ದು, ಜಿಆರ್ ಎಂದರೆ ಗಡಂಗ ರಕ್ಕಮ್ಮ ಎಂದು ಬಹಿರಂಗಗೊಳಿಸಿದ್ದಾರೆ. ರಕ್ಕಮ್ಮನಿಗೆ ಗೊತ್ತಿಲ್ಲದೇ ಇರುವುದು ಏನು ಇಲ್ಲ ಎನ್ನುತ್ತಾ ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಅನ್ನು ರಕ್ಕಮ್ಮ ಪಾತ್ರ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ. ಪೋಸ್ಟರ್ ನಲ್ಲಿ ಜಾಕ್ವೆಲಿನ್ ಕೈನಲ್ಲಿ ಮದ್ಯ ಬಾಟಲ್ ಹಿಡಿದು ಸಖತ್ ಆಗಿ ಪೋಸ್ ನೀಡುತ್ತಿದ್ದು, ಜೊತೆಗೆ ಪೋಸ್ಟರ್ ನಲ್ಲಿ ಬರುವ ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು, ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಮತ್ತಷ್ಟು ಕೂತೂಹಲ ಮುಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.